ಮುದ್ದೇಬಿಹಾಳ : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಮನಿಯಾರ್ ಕಾಂಪ್ಲೆಕ್ಸ್ ನಲ್ಲಿ ಅಮ್ ಆದ್ಮಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಮೆಹಬೂಬ್ ಹಡಲಗೇಲಿ ಅವರು ಪತ್ರೀಕಾಗೋಷ್ಠಿ ಸಭೆ ನಡೆಸಿ ಮಾತನಾಡಿ ನಮ್ಮ ದೇಶದಲ್ಲಿ ಭ್ರಷ್ಟಾಚಾರ ರಹಿತವಾದ ಆಡಳಿತವನ್ನು ಮಾಡಲು ಬೇಕಿರುವ ಏಕೈಕ ಪಕ್ಷ ಎಂದರೆ ನಮ್ಮ ಅಮ್ ಆದ್ಮಿ ಪಕ್ಷವನ್ನು ನಮ್ಮ ರಾಜ್ಯದ ಜನರು ಈ ಭಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಬಲಿಸಿದರೆ, ಸರ್ವ ಜನರಿಗೆ
ಅನುಕೂಲವಾಗುವ ದೃಷ್ಠಿಯಲ್ಲಿ ಆಡಳಿತವನ್ನು ನಾವು ಮಾಡುತ್ತೇವೆ, ಜನರು ಇಂದಿನ ರಾಜಕೀಯ ವ್ಯವಸ್ಥೆಯನ್ನು ನೋಡಿ ಬೇಸತ್ತು ಹೋಗಿದ್ದಾರೆ ಎಂದು ಮಹಿಬೂಬ್ ಹಡಲಗೇಲ ಇದೆ ಸಂದರ್ಭದಲ್ಲಿ ಹೇಳಿದರು. ನಮ್ಮ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಪ್ರಭಲ ಟಿಕೇಟ್
ಆಕಾಂಕ್ಷೀಯಾಗಿದ್ದ ನಾನು ರಾಜಕೀಯ ರಂಗದಲ್ಲಿ ಇರುವದಕ್ಕಿಂತ ಈ ಮೊದಲು ಜನಸಾಮಾನ್ಯರಿಗೆ
ಸಾಮಾಜಿಕ ಕಾರ್ಯಗಳನ್ನು ಸಾಕಷ್ಟು ಮಾಡುತ್ತಾ ಬಂದಿದ್ದೇನೆ, ಈ ಹಿಂದೆ ಕರೋನಾದಂತಹ ಮಹಾಮಾರಿ ರೋಗ ಬಂದ
ಸಂದರ್ಭದಲ್ಲಿಯೂ ಸಾರ್ವಜನಿಕರಿಗೆ ನನ್ನಿಂದಾದ ಆಗುವ ಎಲ್ಲಾ ಸಹಾಯ ಸಹಕಾರವನ್ನು ನಾನು ಮಾಡಿದ್ದು ಕೊವಿಡ ಸಂದರ್ಭದಲ್ಲಿ ಮೃತರಾದವರನ್ನು ಮುಂದೆ ನಿಂತು ಅಂತ್ಯಸಂಸ್ಕಾರವನ್ನು ಕೂಡಾ ಮಾಡಿದ್ದೇವೆ, ಎಂದರು ಈ ಹಿಂದೆಯೇ ನಮ್ಮ ಮತಕ್ಷೇತ್ರವು ಸಂಪೂರ್ಣವಾಗಿ ನೀರಾವರಿಯಾಗಬೇಕಾಗಿತ್ತು ಅಷ್ಟೇ ಅಲ್ಲದೆ ಶೈಕ್ಷಣಿಕವಾಗಿ ಕ್ರಾಂತಿ ಕೂಡಾ ಮಾಡಬಹುದಿತ್ತು, ಆದರೆ ಇನ್ನೂ ಆಗದಿರುವದು ದುರಂತದ ಸಂಗತಿ ನಮ್ಮ ಮತಕ್ಷೇತ್ರದಿಂದ ನಾನು
ಚುನಾವಣೆಗೆ ಸ್ಪರ್ದಿಸುತ್ತೇನೆ ಜನರು ನನಗೆ ಆಶಿರ್ವಾದ ಮಾಡುತ್ತಾರೆ ನಮ್ಮ ಪಕ್ಷ ಏನಾದರೂ ಅಧಿಕಾರಕ್ಕೆ ಬಂದರೆ ನಮ್ಮ ರಾಜ್ಯದಲ್ಲಿ ಹಾಗೂ ನನ್ನ ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ, ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ನೀಡುತ್ತೇವೆ ಎಂದರು ಈ ಸಂಧರ್ಭದಲ್ಲಿ ರೇವಣಸಿದ್ದಪ್ಪ ನಾಯಕ, ಲಾಲಸಾಬ ಜತ್ತಿ, ಹಣಮಂತ ಮೇಟಿ. ಯಲ್ಲಪ್ಪ ಚಲವಾದಿ,
ರಾಜು ಬಸಲದಿನ್ನಿ, ಪ್ರಭು ಬಳಬಟ್ಟಿ ಸೇರಿದಂತೆ ಇನ್ನಿತರರು ಇದ್ದರು.