ನಿಡಗುಂದಿ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಚೆಕ್ ಪೋಸ್ಟಿನಲ್ಲಿ, ಇಂದು ಸರ್ವೇ ಸಾಮಾನ್ಯವಾಗಿ ಕೆ ಎಸ್ ಆರ್ ಟಿ ಸಿ ಬಸ್ಸನ್ನು, ನಿಲ್ಲಿಸಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಪರಿಶೀಲನೆ ಮಾಡಿದಾಗ ಹಣ ಪತ್ತೆಯಾಗಿದೆ
ಬಸ್ ನಲ್ಲಿ ಇದ್ದ ನೂರ್ಖಾನ್ ಮೈಬೂಬಸಾಬ ದಪ್ಪೇದಾರನ ಹತ್ತಿರ 9,95,0000 ಹಣ ಇದ್ದವು ಎಂದು ತಿಳಿದು ಬಂದಿದೆ ನಂತರ ಇವರು ಉಳ್ಳಾಗಡ್ಡಿ ವ್ಯಾಪಾರಸ್ಥರು, ಮೈಸೂರ, ಹೊಸುರ,ವ್ಯಾಪಾರವನ್ನು ಮುಗಿಸಿಕೊಂಡು ವ್ಯಾಪಾರದ ಹಣವನ್ನು ಬಸ್ಸಿನಲ್ಲಿ ಇಟ್ಟುಕೊಂಡು ತಮ್ಮ ಊರಿಗೆ ಬರುವಾಗ, ರಾಷ್ಟ್ರೀಯ ಹೆದ್ದಾರಿ ಯಲಗೂರು ಚೆಕ್ಪೋಸ್ಟ್ ಕೆಎಸ್ಆರ್ಟಿಸಿ ಬಸ್ಸನ್ನು ಚೆಕ್ ಮಾಡಿ ದಾಖಲೆಗಳನ್ನು ಕೇಳಿದ್ದಾರೆ ಅವನಲ್ಲಿರುವ ದಾಖಲೆಗಳಿಗೂ ಹಣಕ್ಕೂ ವ್ಯತ್ಯಾಸ ಕಂಡು ಬಂದಿರುವದರಿಂದ ಆ ಎಲ್ಲಾ ಹಣವನ್ನು ನಿಡಗುಂದಿಯ ದಂಡಾಧಿಕಾರಿಗಳಾದ ಕಿರಣ್ ಕುಮಾರ್ ಕುಲಕರ್ಣಿ, ಮತ್ತು ಪಿಎಸ್ಐ ಎಚ್ ವೈ ಬಾಲದಂಡೆ, ಎಸ್, ಎಸ್,ಟಿ,ತಂಡ, ಹಾಗೂ ಎಸ್, ಎಸ್,ಬಡಿಗೇರ, ಎಮ್.ವಿ, ಮಠ, ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ
ಎಲ್ಲಾ ಚೆಕ್ ಪೋಸ್ಟಿನ ಸಿಬ್ಬಂದಿ ಉಪಸ್ಥಿತರಿದ್ದರು,