ಪರಿಸರ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸಿಮಿತವಾಗದಿರಲಿ :ವಿರೇಶ ಹಿರೇಮಠ ಅಭಿಪ್ರಾಯ
ಬೆಳಗಾವಿ:-ಜೂನ-05 ಒಂದು ಬಿಲ್ವ ಪತ್ರೆಗಿಡ ಕೋಟಿ ಸಸಿಗಳಿಗೆ ಸಮ ಎಂದು ನಗರದ ಸರ್ವಲೋಕಸೇವಾ ಫೌಂಡೇಶನ ಸಂಸ್ಥಾಪಕರು ಹಾಗೂ ಸಮಾಜ ಸೇವಕರಾದ ವಿರೇಶ ಹಿರೇಮಠ ಅವರು ವಿಶ್ವ ಪರಿಸರ ದಿನದ ಅಂಗವಾಗಿ ಇಂದಿಗೆ ಒಂದು ಲಕ್ಷ ಬಿಲ್ವ ಪತ್ರೆಯ ಸಸಿಗಳನ್ನು ನೆಟ್ಟು ಅವರ ಸಂಕಲ್ಪವನ್ನು ಪೂರ್ಣ ಗೊಳಿಸಿದ್ದಾರೆ.
ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗ ಹಂಚಿಕೊಂಡಿರುವ ಖಾನಾಪುರ, ಜಾಂಬೋಟಿ, ಚಂದಗಡ, ಹಾಗೂ ಭೀಮಗಡ ಅರಣ್ಯ ಪ್ರದೇಶದಲ್ಲಿ ಸಾವಿರಕ್ಕೂ ಅಧಿಕ ಬಿಲ್ವ ಪತ್ರೆಯ ಮರಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಉಚಿತವಾಗಿ ನೆಟ್ಟು ಸಾಮಾಜಿಕ ಕಾರ್ಯವನ್ನು ಅವರು ಯಶಸ್ವಿಯಾಗಿ ನಿರ್ವಸಿತ್ತಿದ್ದು, ಜಿಲ್ಲೆಯ ವಿವಿಧ ದೇವಾಲಯದ ಮುಂಭಾಗದಲ್ಲಿ ಸಹ ಅವರು ಬಿಲ್ವ ಪತ್ರಿಯ ಸಸಿಗಳನ್ನು ನೆಟ್ಟು ಅದರ ಒಂದು ಪ್ರಾಮುಖ್ಯತೆ ಅರಿವು ಮೂಡಿಸುತ್ತಿದ್ದಾರೆ.
ಈ ಸಂಧರ್ಭದಲ್ಲಿ ಅವರು ಮಾತನಾಡಿ ಪ್ರತಿಯೊಬ್ಬ ಯುವ ಜನತೆ ಕೇವಲ ಪರಿಸರ ದಿನವನ್ನು ಕೇವಲ ಒಂದು ದಿನಕ್ಕೆ ಸಿಮಿತಗೊಳಿಸದೇ ಅದನ್ನು ಪ್ರತಿ ದಿನ ಪರಿಸರ ದಿನ ಆದರೆ ಮಾತ್ರ ಭೂಮಿ ಮೇಲಿನ ಪ್ರತಿ ಒಂದು ಜೀವ ಸಂಕುಲಕ್ಕು ಉತ್ತಮ ಗುಣಮಟ್ಟದ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬಿಲ್ವ ಪತ್ರೆ ಮರಗಳು ಹೆರಳವಾಗಿ ಪರಿಸರದಲ್ಲಿ ಆಕ್ಸಿಜನ್ ಒದಗಿಸುತ್ತದೆ ಇದು ಕೇವಲ ಸಾಮಾನ್ಯ ಮರ ಅಲ್ಲ ಭೂಮಿ ಮೇಲೆ ಸಕಲ ಜೀವಿಗಳಿಗು ಪ್ರಾಣಾವಾಯು ಒದಗಿಸುವ ವಿಶೇಷ ಸಸಿ ಎಂದು ಅವರು ವ್ಯಕ್ತಪಡಿಸಿದರು ಅಳಿವಿನಂಚಿನಲ್ಲಿರುವ ಈ ವಿಶೇಷ ಪ್ರಬೇದದ ಸಸಿಗಳನ್ನು ರಕ್ಷಿಸಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರ ಸಾಮಾಜಿಕ ಕಳಕಳಿ