ಜಗದೀಶ್ ಶೆಟ್ಟರ್‌ಗೆ ಯಾಕೆ ಟಿಕಟ್ ನೀಡಿಲ್ಲವೆಂದು ತಿಳಿಸಿದ್ದೇವೆ: ಹುಬ್ಬಳ್ಳಿಯಲ್ಲಿ ಅಮಿತ್ ಶಾ ಪತ್ರಿಕಾಗೋಷ್ಠಿ
ಹುಬ್ಬಳ್ಳಿ :
ಹುಬ್ಬಳ್ಳಿಯಲ್ಲಿ ಪ್ರತಿಕಾಗೋಷ್ಠಿ ನಡೆಸಿದ ಅಮಿತ್ ಶಾ, ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಹುಬ್ಬಳ್ಳಿ – ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅವರು ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಪ್ರತಿಕಾಗೋಷ್ಠಿ ನಡೆಸಿದ ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಅವರಿಗೆ ಎಲ್ಲಾ ವಿಚಾರ ಗೊತ್ತಿದೆ. ಅವರಿಗೆ ಟಿಕೆಟ್ ಯಾಕೆ ನೀಡಿಲ್ಲ ಎಂಬ ಬಗ್ಗೆ ಕೂಡ ತಿಳಿಸಿದ್ದೇವೆ. ಕಾರ್ಯಕರ್ತರ ಮಧ್ಯೆ ನಡೆಯುವ ವಿಚಾರವನ್ನು ಬಹಿರಂಗ ಪಡಿಸುವುದುದಿಲ್ಲ. ಈ ಬಗ್ಗೆ ಜನರು ಕೇಳಿದರೆ ಅವರಿಗೆ ಉತ್ತರ ನೀಡ್ತೇವೆ ಎಂದು ಹೇಳಿದ್ದಾರೆ.
ಶೆಟ್ಟರ್ ಅವರಿಗೆ ಯಾಕೆ ಟಿಕೆಟ್ ನೀಡಿಲ್ಲ ಅಂತ ಅವರಿಗೆ ಹೇಳಿದ್ದೇವೆ. ಅವರು ಪಕ್ಷ ಬಿಟ್ಟಿದ್ದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಯಾರ ಕಪಿಮುಷ್ಠಿಯಲ್ಲೂ ಬಿಜೆಪಿ ಇಲ್ಲ ಎಂದು ಶೆಟ್ಟರ್ ಆರೋಪಕ್ಕೆ ಅಮಿತ್ ಷಾ ಟಾಂಗ್ ನೀಡಿ, ಮೊದಲು ಯಾರ ಮುಷ್ಟಿಯಲ್ಲಿತ್ತು? ಎಂದು ಪ್ರಶ್ನಿಸಿದ್ದಾರೆ. ನಮಗೆ ಸಂಪೂರ್ಣ ವಿಶ್ವಾಸ ಇದೆ. 14 ದಿನದ ಮೊದಲೇ ಹೇಳುತ್ತಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಡಬಲ್ ಎಂಜೀನ್ ಸರ್ಕಾರ ದಿಂದ ರಾಜ್ಯದಲ್ಲಿ ಅಭಿವೃದ್ಧಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೀಸಲಾತಿ ನೀಡುವ ವಿಚಾರ ಸಂಬಂಧ ಮಾತನಾಡಿದ ಶಾ, ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಮುಂದುವರಿದಿದೆ. ಯಾವುದೇ ವ್ಯತಿರಿಕ್ತ ಅಭಿಪ್ರಾಯ ಸುಪ್ರೀಂ ಕೋರ್ಟ್ ನೀಡಿಲ್ಲ. ನಾವು ಜನರಿಗೆ ಮೀಸಲಾತಿ ನೀಡುವ ಬದ್ಧತೆ ಹೊಂದಿದ್ದೇವೆ. ನಾನು ಕಾಂಗ್ರೆಸ್ ಪಕ್ಷವನ್ನು ಕೇಳುತ್ತಿದ್ದೇನೆ. ಯಾವುದನ್ನು ಕಡಿಮೆ ಮಾಡ್ತಿರಿ ಹೇಳಿ, ಯಾರಿಂದ ಮೀಸಲಾತಿ ವಾಪಸ್ ಪಡೆಯುತ್ತೀರಿ. ಕಾಂಗ್ರೆಸ್ ಲಿಂಗಾಯತರಿಗೆ ಎನು ಮಾಡಿದೆ. ಕಾಂಗ್ರೆಸ್ ಲಿಂಗಾಯತ ನಾಯಕರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ನಿಜಲಿಂಗಪ್ಪ ಅವರನ್ನು ಬಳಕೆ ಮಾಡಿ ಕೈಬಿಡಲಾಯಿತು ಎಂದು ಆರೋಪಿಸಿದ್ದಾರೆ.
ವರದಿ ಕಿರಣಗೌಡ ತುಪ್ಪದಗೌಡ್ರ ಹುಬ್ಬಳ್ಳಿ