ಉತ್ತರ ಕರ್ನಾಟಕ ಭಾಷೆಯಲ್ಲಿ, ಬಾಲ್ಯ ಜೀವನವನ್ನು ಮೆಲುಕು ಹಾಕುವ, ನಿಮ್ಮ ಬಾಲ್ಯಕ್ಕೆ ಕರೆದೊಯ್ಯುವ ಚಿತ್ರ “ಸ್ಕೂಲ್ ಡೇಸ್” ಇದೆ ನವಂಬರ್ 24 ಕ್ಕೆ ನಿಮ್ಮ ಮುಂದೆ.
ಬೆಳಗಾವಿ : ಶಾಲೆಯ ಆ ದಿನಗಳೆಂದರೆ ಪ್ರತಿಯೊಬ್ಬರಿಗು ನೆನಪಾಗುವುದೆ ತಮ್ಮ ಶಾಲೆಯಲ್ಲಿ ಮಾಡಿರುವ ತುಂಟಾಟಗಳೆ ಸಾಮನ್ಯವಾಗಿ ನೆನಪಿಗೆ ಬರುವುದು. ಸ್ಕೂಲ್ ಡೇಸ್ ನಾಲ್ಕು ಹುಡುಗರಾದ ಗೋಪ್ಯಾ, ಮಂಜ್ಯಾ, ಬಸ್ಯಾ, ಚಿಕ್ಕ ಈ ನಾಲ್ಕರು ಶಾಲೆಯಲ್ಲಿ ಮಡುವ ತುಂಟತನ, ಗೆಳೆತನ, ಹುಡುಗಿಯರೊಂದಿಗೆ ಮಾಡುವ ಚೇಷ್ಟೇ ಮತ್ತು ಶಿಕ್ಷಕರೊಂದಿಗಿನ ವಡನಾಟ ಎಲ್ಲವನ್ನು ಹಾಸ್ಯಭರಿತವಾಗಿ ತೋರಿಸಲಾಗಿದ್ದು, ಈ ನಾಲ್ವರು ಹೇಗೆ ತಮ್ಮ ಹತ್ತನೆ ತರಗತಿಯನ್ನು ಮುಗಿಸವವರೋ ಎಂಬುದು ಈ ಕಥೆಯ ಸಾರಾಂಶ ಎಂದು ಚಿತ್ರದ ನಿರ್ಮಾಪಕರಾದ ಉಮೇಶ್ ಹಿರೇಮಠ್ ಅವರು ತಿಳಿಸಿದರು.
ಈ ಚಿತ್ರದಲ್ಲಿ ಹಲವು ಹಾಸ್ಯ ಭರಿತ ಸನ್ನಿವೇಶಗಳಿದ್ದು ಎಲ್ಲರಿಗೂ ತಮ್ಮ ಶಾಲೆಯ ದಿನಗಳನ್ನು ಮೆಲುಕು ಹಾಕುವ ಉದ್ದೇಶವಾಗಿದೆ ಎಂದರು.
ಕಲಾವಿದರು : ಸಂದೀಪ್.ಎಸ್.ಎಮ್, ಪ್ರಿಯಾ ಸವಡಿ, ದರ್ಶನ್ ಸೋ ರಾಜಣ್ಣವರ ಅನಿಕೇತ ಗೌಡ ಪಾಟೀಲ್, ಸಂಗಮ್ ಮಠದ್, ನಮ್ರತಾ ಅಗಸಿಮನಿ, ಅರ್ಜುನ ಬಳ್ಳಾರಿ, ವಿವೇಕ್ ಜಂಬಗಿ, ಪ್ರತೀಕ್ , ಸಾಕ್ಷಿ, ನೇಹಾ , ವೀರೇಂದ್ರ, ಅನಿಲ್ ಇದ್ದಾರೆ.
ಕಥೆ, ಚಿತ್ರಕಥೆ ನಿರ್ದೇಶನ:- ಸಂಜಯ್ ಎಚ್
“ಛಾಯಾಗ್ರಹಣ : ಎ.ಆರ್.ಕೃಷ್ಣ – ಕೃಷ್ಣ ನಾಯ್ಕರ್
ಸಂಕಲನ : ಕೆ. ಗಿರೀಶ್ ಕುಮಾರ್
ಸಂಗೀತ: ಕೆ. ಎಮ್.ಇಂದ್ರ
ಕೊರಿಯೊಗ್ರಾಪಿ : ಮದನ್-ಹರಿಣಿ
ಡಿಐ-ಕಲಲಿಸ್ಟ್ : ಸುಪ್ರೀತ್
ಮೇಕಪ್ : ಕೀರ್ತಿ ಗೌಡ
ನಿರ್ಮಾಣ ನಿರ್ವಹಣಿ : ಸಂಗಮ್ ಮಠದ್, ಅನಿಕೇತ ಗೌಡ
ಪ್ರಚಾರ ಕಲೆ : ಮೋಹನ
ಮಿಕ್ಸಿಂಗ್ – ಮಾಸ್ಟಿಂಗ್ : ಸುಜಿತ್ ಶ್ರೀಧರ್
ಪಿ.ಆರ್.ಓ : ಡಾ.ಪ್ರಭು ಗಂಜಿಹಾಳ, ಡಾ.ವೀರೆಶ ಹಂಡಗಿ. ಕಾರ್ಯ ನಿರ್ವಹಿಸಿದ್ದಾರೆ
ಈ ಸಿನಿಮಾದಲ್ಲಿ ಮೂರು ಹಾಡುಗಳು ಇದ್ದು 2 ಹಾಡುಗಳು ಲಹರಿ ಆಡಿಯೋ ದಲ್ಲಿ ಬಿಡುಗಡೆಯಾಗಿದೆ.