ಸಿಎಂ ಬಸವರಾಜ ಬೋಮ್ಮಾಯಿ ಯಿಂದ ಭರ್ಜರಿ ರೋಡ್ ಶೊ ಮೂಲಕ ಮತ ಯಾಚನೆ
ಕುಂದಗೋಳ ಮತ ಕ್ಷೇತ್ರದ ಕುಂದಗೋಳ ಪಟ್ಟಣದಲ್ಲಿ ಇಂದು ರಾಜ್ಯದ ಮುಖ್ಯಮಂತ್ರಿಗಳು
ಬಸವರಾಜ ಬೊಮ್ಮಾಯಿ ಅವರು ಕುಂದಗೋಳ ನಗರದ ಕನಕದಾಸರ ಪುತ್ತಳಿ ಯಿಂದ ಮೂರಂಗಡಿ ಕ್ರಾಸ್ ವರೆಗೆ ರೋಡ್ ಶೋ ಮೂಲಕ ಕ್ಷೇತ್ರದ ಭಾಜಪ ಅಭ್ಯರ್ಥಿಗಳಾದ ಎಂ ಆರ್ ಪಾಟೀಲರ ಪರವಾಗಿ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇತಿಹಾಸದಲ್ಲಿ ಆಗದೆ ಇರುವಂತಹ ಅಭಿವೃದ್ಧಿ ಕಾರ್ಯಕ್ರಮಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಆಗಿದ್ದು ಇದಕ್ಕೆ ಶ್ರಮಿಸಿದ ಎಂ ಆರ ಪಾಟೀಲ ರ ಕಾರ್ಯ ಶ್ಲಾಘನೀಯ ಎಂದರು ಈ ಬಾರಿಯು ರಾಜ್ಯದಲ್ಲಿ ಭಾಜಪ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ದ ಆದ್ದರಿಂದ ಕ್ಷೇತ್ರದ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಎಂ ಆರ್ ಪಾಟೀಲರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ ವಿಧಾನ ಸಭೆಗೆ ಕಳಿಸಿ ಸಮಗ್ರ ತಾಲ್ಲೂಕನ್ನು ಮಾದರಿ ತಾಲೂಕನ್ನಾಗಿಸಲು ಎಲ್ಲರೂ ಊಳಿದಿರುವ ಐದು ದಿನಗಳ ಕಾಲ ಶ್ರಮವಹಿಸಿ ಭಾಜಪ ಅಭ್ಯರ್ಥಿಗಳಾದ ಎಂ ಆರ್ ಪಾಟೀಲರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಎಂದು ಕರೆಕೊಟ್ಟರು.
ಸಂದರ್ಭದಲ್ಲಿ ಮಾತನಾಡಿದ ಭಾಜಪ ಅಭ್ಯರ್ಥಿಗಳಾದ ಎಂ ಆರ್ ಪಾಟೀಲ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಜಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಜಿ ಹಾಗೂ ಲೊಕೊಪಯೋಗಿ ಸಚಿವರಾದ ಸಿ ಸಿ ಪಾಟೀಲರ ಸಹಕಾರದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ