ರೂರಲ್ ಮತ್ತು ಅರ್ಬನ್ ಡೆವಲಪ್ಮೆಂಟ್ ಸೊಸೈಟಿ ಉದ್ಘಾಟಿಸಿದ ಶಂಭು ಕಲ್ಲೋಳಿಕರ
ಕಂಕಣವಾಡಿ: ರಾಯಬಾಗ ತಾಲೂಕಿನ ಕಂಕನವಾಡಿ ಪಟ್ಟಣದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ್ ರೂರಲ್ ಮತ್ತು ಅರ್ಬನ್ ಡೆವಲಪ್ಮೆಂಟ್ ಸೊಸೈಟಿಯನ್ನು ಉದ್ಘಾಟಿಸಿದರು ಪಟ್ಟಣದಲ್ಲಿ ರೇಬಿನ್ ಕಟ್ ಮಾಡಿ ಸೊಸೈಟಿ ಉದ್ಘಾಟಿಸಿ ನಂತರ ಮಾತನಾಡಿದ ಅವರು
ಈ ಸೊಸೈಟಿ ಬಡ್ಡಿಯೂ ಕಡಿಮೆ ಇದೆ ಮುಂಬರುವ ದಿನಗಳಲ್ಲಿ ಈ ಸೊಸೈಟಿಯು ಎಲ್ಲ ರೈತ ಬಾಂಧವರಿಗೆ ಅನುಕೂಲ ಮಾಡಿಕೊಡಲಿದೆ ಇದರ ಉಪಯೋಗವನ್ನು ಎಲ್ಲ ರೈತ ಬಾಂಧವರು ತೆಗೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಮುಖಂಡರು ಡಾ. ಗೋಪಾಲ್ ಪೂಜಾರಿ, ರಾಜಶ್ರೀ ಬೆಳಗಲಿ, ಬಸ್ಸು ಅರಭಾವಿ, ಮಹದೇವ ಕಮರಿ, ಲಕ್ಷ್ಮಣ್ ದಂಡಾಪುರ, ರಾಘು ಸನದಿ, ಕಿರಣ್ ಕಲ್ಲೋಳಿಕರ್, ಹಾಗೂ ಯುವಕರು ಗುರು ಹಿರಿಯರು ಉಪಸ್ಥಿತರಿದ್ದರು