ಗಂದದ ಗಿಡ ನೆಡುವ ಮೂಲಕ ಗುರು ಪೂರ್ಣಿಮೆ ಆಚರಿಸಿಕೊಂಡ ಪ್ರವೀಣ ಹಿರೇಮಠ
Praveen Hiremath celebrated Guru Purnima by planting sandalwood plant
ಬೆಳಗಾವಿ : ಗುರುಪೂರ್ಣಿಮೇಯ ನಿಮಿತ್ತ ಬೆಳಗಾವಿಯ ಉತ್ತರ ವಲಯದ ವಂಟಮುರಿ ಬಡಾವಣೆಯ ಸಾಯಿ ಮಂದಿರದ ಉದ್ಯಾನದಲ್ಲಿ ಸಸಿ ನೆಡುವ ಕಾರ್ಯ ನಡೆಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರವೀಣ ಹಿರೇಮಠ ವಿಶೇಷ ರೀತಿಯಲ್ಲಿ ಗಂಧದ ಸಸಿ ನೆಡುವ ಮೂಲಕ ಪರಿಸರ ಕಾಳಜಿ ಬಗ್ಗೆ ಸಂದೇಶ್ ಸಾರಿದ್ದಾರೆ.
ಗುರುಪೂರ್ಣಿಮಾ ಹಿಂದೂ ಸಂಪ್ರದಾಯದಲ್ಲಿ ಒಂದು ಮಹತ್ವದ ಹಬ್ಬವಾಗಿದೆ ಈ ಶುಭ ಸಂದರ್ಭವು ನಮಗೆ ಜ್ಞಾನ ಮತ್ತು ಬುದ್ಧಿವಂತಿಕೆಯ ಹಾದಿಯಲ್ಲಿ ಮಾರ್ಗದರ್ಶನ ಮತ್ತು ಜ್ಞಾನವನ್ನು ನೀಡಿದ ಗುರುಗಳಿಗೆ ಗೌರವ ಸಲ್ಲಿಸಲು ಅವಕಾಶ ಮತ್ತು ಸಮಯವನ್ನು ಒದಗಿಸುತ್ತದೆ ಎಂದು ಕೆಆರಪಿಪಿ ಅಭ್ಯರ್ಥಿ ಪ್ರವೀಣ್ ಹಿರೇಮಠ ಹೇಳಿದ್ದಾರೆ.
ಗುರುಪೂರ್ಣಿಮೆಯು ಗುರುವಿನ ಬಗ್ಗೆ ಗುರುತಿಸುವಿಕೆ, ಸಂಬಂಧ ಮತ್ತು ಗೌರವದ ದಿನವಾಗಿದೆ. ಇದು ಶಿಷ್ಯನಿಂದ ಗುರುವಿಗೆ ಸ್ವೀಕಾರದ ಅತ್ಯುನ್ನತ ರೂಪವೆಂದು ಪರಿಗಣಿಸಲಾಗಿದೆ. ಗುರುಪೂರ್ಣಿಮೆಯು ಗುರು ಮತ್ತು ಶಿಷ್ಯರ ನಡುವಿನ ಬಾಂಧವ್ಯದ ಆಚರಣೆಯಾಗಿದೆ, ಇದು ನಂಬಿಕೆ, ಮಾರ್ಗದರ್ಶನ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಮೇಲೆ ನಿರ್ಮಿಸಲಾದ ಸಂಬಂಧವಾಗಿದೆ ಎಂದು ಪ್ರವೀಣ ಹೇಳಿದ್ದಾರೆ.
ಗಂಧದ ಸಸಿ ನೆಡುವ ಮೂಲಕ ವಿಶೇಷವಾಗಿ ಗುರುಪೂರ್ಣಿಮಾ ಆಚರಿಸಿಕೊಂಡ ಪ್ರವೀಣ ಹಿರೇಮಠ ಕನ್ನಡ ನಾಡು ಗಂಧದ ನಾಡು ಆದರೆ ಮಾನವನ ಅತೀ ಆಸೆಯಿಂದಾಗಿ ಅಳುವಿನ ಅಂಚಿಗೆ ಬಂದಿದೆ ಎಂದು ಪ್ರವೀಣ್ ಹೇಳಿದ್ದಾರೆ ಆದ್ದರಿಂದ ನಾವು ಸಾಧ್ಯವಾದಷ್ಟು ಗಂಧದ ಗಿಡ ನೆಡುವ ಮೂಲಕ ನಮ್ಮ ಕರುನಾಡು ಮತ್ತೆ ಗಂಧದ ನಾಡು ಆಗಿ ತನ್ನ ಪರಿಮಳ ಇಡೀ ಜಗತ್ತಿಗೆ ಬೀರಲಿ ಎಂದು ಪ್ರವೀಣ್ ಹೇಳಿದ್ದಾರೆ.
ತಮ್ಮ ಮುಂದಿನ ಕಾರ್ಯಗಳ ಬಗ್ಗೆ ತಿಳಿಸಿರುವ ಪ್ರವೀಣ್ ಮುಂದೆ ಬರುವ ದಿನಗಳಲ್ಲಿ ಗಾಲಿ ಜನಾರ್ಧನ್ ರೆಡ್ಡಿ ಅವರ ಕಲ್ಯಾಣ್ ರಾಜ್ಯ ಪ್ರಗತಿ ಪಕ್ಷದವತಿಯಿಂದ ಮತ್ತಷ್ಟು ಜನ ಕಲ್ಯಾಣ್ ಕಾರ್ಯಗಳನ್ನು ಮಾಡುವ ಮೂಲಕ ಬೆಳಗಾವಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಗಟ್ಟಿ ಗೊಳಿಸುತ್ತೇನೆ ಎಂದರು.
ಈ ಸಮಯದಲ್ಲಿ ಮಾತನಾಡಿದ ಹಿರಿಯ ವಕೀಲರಾದ ಆರ್ ಪಿ ಪಾಟೀಲ ಭಾರತ ದೇಶದಲ್ಲಿ ಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ ಒಬ್ಬ ವ್ಯಕ್ತಿ ಮುಂದೆ ಬರಬೇಕಾದರೆ ಗುರುವೇ ಕಾರಣ ಎಂದು ಹೇಳಿದ್ದಾರೆ.
ಪ್ರವೀಣ್ ಹಿರೇಮಠರವರ ಕಾರ್ಯವನ್ನು ಶ್ಲಾಘಿಸಿದ ಪಾಟೀಲ ಗುರುಪೂರ್ಣಿಮಾ ದಿನದ ಮಹತ್ವವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದನ್ನು ಕಂಡು ಖುಷಿಯಾಗಿದೆ ಎಂದು ಹೇಳಿದ್ದಾರೆ.
ಇದೆ ಸಮಯದಲ್ಲಿ ಮಾತನಾಡಿದ ಡಾ.ಬಸವರಾಜ್ ಭಾಗೋಜಿಯವರು ಪ್ರವೀಣ್ ಅವರ ಕಾರ್ಯವನ್ನು ಎತ್ತಿ ಹಿಡಿದ್ದಾರೆ ಮತ್ತು ಸಸ್ಯ ಸಂಕುಲ ಪ್ರಾಣಿ ಸಂಕುಲ ಉಳಿದರೆ ಮಾತ್ರ ಪ್ರಾಣಿ ಸಂಕುಲ ಉಳಿಯಲು ಸಾಧ್ಯ ಇಲ್ಲವಾದಲ್ಲಿ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ ಆದ್ದರಿಂದ ಸಸ್ಯವನ್ನು ಒಂದು ಮಗುತರ ಪೋಷಿಸಿ ಬೆಳೆಸಲು ಕರೆ ನೀಡಿದ್ದಾರೆ.