ಕುರುಬ ಸಮುದಾಯದ ಸಮಾವೇಶಕ್ಕೆ ಶುಭಾಶಯ ಕೋರಿದ ಯಾದವ್ ಸಮುದಾಯದ ನಾಗರಾಜ ಯಾದವ್
ಬೆಳಗಾವಿ : ಅಕ್ಟೊಂಬರ್ 3, ಮಂಗಳವಾರ ನಡೆಯಲಿರುವ ಕುರುಬ ಸಮುದಾಯದ ಸಮಾವೇಶಕ್ಕೆ ಎಮ್.ಎಲ್.ಸಿ ನಾಗರಾಜ್ ಯಾದವ್ ಶುಭಾಶಯ ಕೋರಿದರು. ಕುರುಬ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಕುರುಬ ಸಮುದಾಯದ ಜನರು ಆಗಮಿಸುತ್ತಿದ್ದು, ಸಮಾವೇಶ ಯಶಸ್ವಿಯಾಗಲಿ ಎಂದು ಹರಿಸಿದರು.
ಬೆಳಗಾವಿಯಲ್ಲಿ ಮಂಗಳವಾರ ಕೆ.ಎಲ್.ಇ ಹತ್ತಿರ ಇರುವ ಜಿಲ್ಲಾ ಕ್ರಿಡಾಂಗಣದಲ್ಲಿ ಸಮಾವೇಶ ಆಯೋಜನೆ ಮಾಡಿದ್ದು, ಕುರುಬ ಸಮುದಾಯದ ಜನರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದು, ನಾವು ಯಾದವ್ ಸಮುದಾಯದವರಾದರು ಕುರುಬ ಸಮುದಾಯಕ್ಕು ಹಾಗೂ ಯಾದವ್ ಸಮುದಾಯಕ್ಕು ಅವಿನಾಭಾವ ಸಂಬಂದವಿದೆ. ನಾವು ಯಾದವರು ಆಕಳನ್ನು ಕಾಯುತ್ತೇವೆ, ಕುರುಬರು ಕುರಿಯನ್ನು ಕಾಯುತ್ತಾರೆ ಇಬ್ಬರದು ಒಂದೇ ವೃತ್ತಿ ಆದ್ದರಿಂದ ಅವರ ಸಮಾವೇಶ ಯಶಸ್ವಿಯಾಗಲಿ ಎಂದು ಹರಸುತ್ತೇವೆ ಎಂದರು.