2023 ನೇ ಸಾಲೀನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಕೆಲವೇ ದಿನಗಳಲ್ಲಿ ಬಿಡುಗಡೆ: ಜಿಲ್ಲೆಯಿಂದ ಆಯ್ಕೆಯಾದಲ್ಲಿ ನಮ್ಮ ಜಿಲ್ಲೆಗೆ ಹೆಮ್ಮೆ ವಿರೇಶ ಹಿರೇಮಠ
ಬೆಳಗಾವಿ: 2023 ನೇ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯು ಕೇಲವೆ ದಿನಗಳಲ್ಲಿ ಆಯ್ಕೆ ಪಟ್ಟಿ ಬಿಡುಗಡೆಯಾಗಲಿದ್ದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳಿಗೆ ಈ ಬಾರಿ 68 ನೇ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಈ ರಾಜ್ಯೋತ್ಸವ ಪ್ರಶಸ್ತಿಯು ವಿವಿಧ ಕ್ಷೇತ್ರಗಳಾದ ಕ್ರೀಡೆ, ಕಲಾ ವಿಭಾಗ ಚಿತ್ರರಂಗ ಹಾಗೂ ಪರಿಸರ ಸಮಾಜಸೇವೆ ಇನ್ನೂ ಹಲವಾರು ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯ ವ್ಯಕ್ತಿಗಳಿಗೆ ಸಾಮಾಜಿಕ ಕಳ-ಕಳಿಯುಳ್ಳ ವ್ಯಕ್ತಿಗಳಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಗುರುತಿಸಿ ನೀಡುತ್ತದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕ ಸಾಧಕರು ಪರಿಸರವಾದಿಗಳು, ಸಮಾಜಿಕ ಕಾರ್ಯಕರ್ತರು ಈಗಾಗಲೇ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದು ಆ ಅರ್ಜಿಗಳನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ ಹಾಗೂ ರಾಜ್ಯೋತ್ಸವ ಆಯ್ಕೆ ಸಮಿತಿಯಿಂದ ಅರ್ಜಿಗಳ ಪರಿಶೀಲನೆ ಮಾಡಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತಿದ್ದು ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಆಯ್ಕೆ ಪಟ್ಟಿ ಬಿಡುಗಡೆಯಾಗಲಿದೆ.
ಬೆಳಗಾವಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ, ದೇವರ ಮಗ, ಪರಿಸರ ವಾದಿ ಎಂದೇ ಖ್ಯಾತಿಯಾದ ವಿರೇಶ ಬಸ್ಸಯ್ಯ ಹಿರೇಮಠ ಇವರ ಅನೇಕ ಸಮಾಜ ಮುಖಿ ಕೆಲಸಗಳನ್ನ ಗುರುತಿಸಿ ಬೆಳಗಾವಿ ಜಿಲ್ಲಾಡಳಿ ಕಳೆದ ವರ್ಷದಲ್ಲಿ ಈಗಾಗಲೇ ಜಿಲ್ಲಾಡಳಿತ ನೀಡುವ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈಗ ಇವರು ಸಹ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ.
ರಸ್ತೆ ಬದಿಯಲ್ಲಿ ಇರಿಸಲಾದ ದೇವರ ಪೋಟೋ ಸಂಗ್ರಹಣೆ ಮಾಡಿ ಸಾಮೂಹಿಕವಾಗಿ ನದಿಯಲ್ಲಿ ವಿಸರ್ಜನೆ ಮಾಡವುದು,
ಸಾವಿರಾರು ಸಸಿಗಳನ್ನು ಜಿಲ್ಲಾದ್ಯಾಂತ ನೆಟ್ಟಿರುವುದು, ಅನಾಥಶ್ರಾಮದಲ್ಲಿ ಹಿರಿಯ ಜಿವಿಗಳಿಗೆ ಆಶ್ರಯತಾಣ, ರಸ್ತೆ ಅಪಘಾತದಲ್ಲಿ ಮೃತ ಪಟ್ಟ ಪ್ರಾಣಿ – ಪಕ್ಷಿಗಳಿಗೆ ವಿದಿ-ವಿಧಾನವಾಗಿ ಅಂತಿಮ ಸಂಸ್ಕರಾವನ್ನ ಮಾಡುತ್ತಾರೆ.
ಆಸ್ಪತ್ರೆ ಪರಿಕರವಾದ ಆಮ್ಲ ಜನಕ,ವಿಲ್ ಚೇರ್- ಅಂಬುಲೆನ್ಸ್ ಸೇವೆಯನ್ನು ಸಹ ಇವರು ಬಡ ರೋಗಿಗಳಿಗೆ ಉಚಿತ ಸೇವೆ ಸಲ್ಲಿಸುತ್ತಿದ್ದು ಇವರ ಈ ಕಾರ್ಯಕ್ಕಾಗಿ ಜಿಲ್ಲಾದ್ಯಾಂತ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿರೇಶ ಹಿರೇಮಠ ಇವರು ಮಾಡುವಂತಹ ಸಾಮಾಜಿಕ ಕಾರ್ಯವು ಜಿಲ್ಲೆಯಲ್ಲಿ ಅನೇಕರಿಗೆ ಸ್ಪೂರ್ತಿದಾಯಕವಾಗಿದ್ದು ಇವರ ಸಮಾಜಮುಖಿ ಕಾರ್ಯವನ್ನು ಅನೇಕ ಯುವಕರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.
ಇವರು ಮಾಡುವಂತಹ ಸಾಮಾಜಿಕ ಕಾರ್ಯವನ್ನು ರಾಜ್ಯ ಸರ್ಕಾರ ಹಾಗೂ ರಾಜ್ಯೋತ್ಸವ ಆಯ್ಕೆ ಸಮಿತಿ ಇದನ್ನು ಗಮನಿಸಿ ಆಯ್ಕೆ ಮಾಡಿದ್ದೆ ಆದಲ್ಲಿ ಇವರ ಈ ಸಮಾಜಮುಖಿ ಕಾರ್ಯ ರಾಜ್ಯಾದ್ಯಂತ ಪಸರಿಸಿ ಇತರರಿಗೂ ಮಾದರಿಯಾಗುತ್ತದೆ.
ಅದೇ ರೀತಿ ಬೆಳಗಾವಿ ಜಿಲ್ಲೆಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ವ್ಯಕ್ತಿ ಹಾಗೂ ಜಿಲ್ಲೆಯ ಹಿರಿಮೆ ಹೆಚ್ಚುತ್ತದೆ. ಎಂದು ವಿರೇಶ ಅವರ ಅಭಿಪ್ರಾಯ.
***