ಅಗತ್ಯ ಸಿಬ್ಬಂದಿಗಳ ಕೊರತೆಯಿಂದ ಅವ್ಯವಸ್ಥೆಯ ಗೂಡಂತಾದ ಗಾಣಧಾಳು ಪ್ರಾಥಮಿಕ ಆರೋಗ್ಯ ಕೇಂದ್ರ
ದೇವದುರ್ಗ: ಜಾಲಹಳ್ಳಿ ಸಮೀಪದ ಗಾಣಧಾಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಸಿಬ್ಬಂದಿಗಳ ಕೊರತೆಯಿಂದ ಅವ್ಯವಸ್ಥೆಯ ಗೂಡಂತಾಗಿದೆ
ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವಂತ ರೋಗಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ
ಕಸ ವಿಲೇವಾರಿ ಮಾಡದೆ ಇರುವುದು ಸ್ವಚ್ಚತೆ ಕಾಣದೆ ಮರೀಚಿಕೆ ಆಗಿದೆ ಡಿ ಗ್ರೂಪ್ ಸಿಬ್ಬಂದಿಗಳು ಗುತ್ತಿಗೆ ಆಧಾರದ ಮೇಲೆ 3 ತಿಂಗಳ 4 ತಿಂಗಳ ಮಾತ್ರ ಅವಧಿಗೆ ಬರುತ್ತಾರೆ ಇನ್ನುಳಿದ 6 ತಿಂಗಳವರೆಗೆ ದೇವರೆ ಗತಿ ಆರೋಗ್ಯ ಕೇಂದ್ರದ ಯಾವುದೇ ರೀತಿಯ ಕೆಲಸವನ್ನು ಸ್ವತಃ ನರ್ಸ್ ಗಳು ಕೂಲಿ ಕಾರ್ಮಿಕರನ್ನು ಕರೆ ತಂದು ಸ್ವಚ್ಚತೆ ಗೋಳಿಸುವಂತ ಪರಿಸ್ಥಿತಿ ಬಂದೊದಗಿದೆ ಔಷಧಿ ವಿತರಕ ಡಿ ಗ್ರೂಪ್ ನೌಕರರು ಮತ್ತು ನರ್ಸ್ ಸಿಬ್ಬಂದಿಗಳ ಕೊರತೆ ಇದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದ ಎಲ್ಲ ಉಪ ಕೇಂದ್ರದಲ್ಲಿ ಸರಿಯಾಗಿ ಸೇವೆ ಸಿಗುತ್ತಿಲ್ಲ ಈಗಾಗಲೇ ಕೇಲ ಹಳ್ಳಿಗಳಲ್ಲಿ ವಿಪರೀತ ಸೊಳ್ಳೆಗಳಿಂದ ವಿವಿಧ ಕಾಯಿಲೆ ಹರಡಿದೆ ಆರೋಗ್ಯ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯ ಧೋರಣೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ ಸಂಬಂಧದ ಪಟ್ಟ ಅಧಿಕಾರಿಗಳು ಅಗತ್ಯ ಸಿಬ್ಬಂದಿಗಳ ಕೊರತೆಯಿಂದ ಅವ್ಯವಸ್ಥೆಯ ಆಗರ ವಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿಗಳ ನೇಮಕ ಮಾಡಬೇಕಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಬಡ ರೋಗಿಗಳಿಗೆ ಚಿಕಿತ್ಸೆಗೆ ಅನುಕೂಲವಾಗುವಂತೆ ಕೋಟಿ ಕೋಟಿ ಅನುದಾನದಲ್ಲಿ ವೆಚ್ಚದಲ್ಲಿ ಆಸ್ಪತ್ರೆಯ ನಿರ್ಮಿಸಿದೆ ಆದರೆ ಪೂರಕವಾಗಿ ಸಿಬ್ಬಂದಿಗಳ ನೇಮಕಾತಿ ಮಾಡದೆ ಇರುವುದು ವಿಪರ್ಯಾಸದ ಸಂಗತಿ
ಸಂಬಂಧ ಪಟ್ಟ ಅಧಿಕಾರಿಗಳು ರೋಗಿಗಳಿಗೆ ಮತ್ತು ಮಹಿಳೆಯರಿಗೆ ಮಕ್ಕಳಿಗೆ ಹಿರಿಯ ನಾಗರಿಕರಿಗೆ ಅಗತ್ಯ ಚಿಕಿತ್ಸೆಗೆ ಸ್ಪಂದಿಸುತ್ತಾ …? ಕಾದುನೋಡಬೇಕಾಗಿದೆ