ಮಲಪ್ರಭಾ ನದಿ ಘಾಟದಲ್ಲಿ ಈಜಲು ಬಂದಿದ್ದ ವ್ಯಕ್ತಿ ನೀರುಪಾಲು.
ಖಾನಾಪೂರ ಮಲಪ್ರಭಾ ನದಿಯ ಘಾಟದಲ್ಲಿ ಈಜಲು ಹೋಗಿದ್ದ ಒಬ್ಬ ಯುವಕ ಮೃತಪಟ್ಟ ಘಟನೆ ನಡೆದಿದೆ, ಮುಳುಗಿರುವ ಯುವಕನ ಹೆಸರು ಸುನೀಲ್ ಚಂದ್ರಪ್ಪ ತಳವಾರ (32) ಅಶೋಕ ನಗರ ಎಂದು ತಿಳಿದು ಬಂದಿದೆ.
ಸುನೀಲ್ ಚಂದ್ರಪ್ಪ ತಳವಾರ ಇತನು ತನ್ನ ಕುಟುಂಬದ ಸದಸ್ಯರೊಂದಿಗೆ ಸ್ಥಾನಕ್ಕಾಗಿ ಬಂದಿದ್ದು, ಇತನು ನೀರಿನಲ್ಲಿ ಇಳಿಯುತ್ತಿದ್ದಂತೆಯೇ ನೀರಿನ ಆಳ ಹೆಚ್ಚು ಇರುವುದರಿಂದ ಮುಳುಗಲು ಪ್ರಾರಂಭಿಸಿದ್ದು, ನೋಡು ನೋಡುತ್ತಿದ್ದಂತೆಯೇ ಮುಗುಳು ಬಿಟ್ಟ ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ ಶೋಧ ಕಾರ್ಯ ನಡೆಸಿದರು,ಘಂಟನೆ ನಡೆದು ಮೂರು ಘಂಟೆಗಳ ಕಾಲ ಕಳೆದರೂ ಇನ್ನೂ ವರೆಗೂ ಸುನೀಲ್ ಮೃತ ದೇಹ ಪತ್ತೆ ಆಗಿಲ್ಲ, ಘಟನಾಸ್ಥಳಕ್ಕೆ ಖಾನಾಪೂರ ಪಿಎಸ್ಐ ಪ್ರಕಾಶ್ ರಾಠೋಡ್ ಅವರು ಕೂಡಾ ತನ್ನ ಸಿಬ್ಬಂದಿಗಳೊಂದಿಗೆ ಬಿಡು ಬಿಟ್ಟಿದು ಯಾವುದೇ ರೀತಿಯ ಪ್ರಗತಿ ನಡೆದಿಲ್ಲ ಒಟ್ಟಾರೆ ನೋಡು ನೋಡುತ್ತಿದ್ದಂತೆಯೇ ತಮ್ಮ ಕುಟುಂಬದ ಸದಸ್ಯರ ಮುಂದೆಯೇ ಸುನೀಲ್ ಮಾಯ ವಾಗಿದ್ದು ದುರ್ದೈವದ ಸಂಗತಿ.