ಬಲಿದಾನ ದಿನ
ಅದೊಂದು ಕರಾಳ ದಿನದ ನೋವು ಇನ್ನು ಆ ವೀರ ಯೋಧರ ಕುಟುಂಬಕಿದೆ …
ನೆನಪಿದಿಯೆ ಆ ಫೆಬ್ರವರಿ ಹದಿನಾಲ್ಕು
ಉಸಿರಿರುವವರೆಗೂ ಹೆಸ್ರು
ಅಳಿಯದಿರಲಿ ಯೋಧನದ್ದು ….
ಅದೆಷ್ಟೋ ಜೀವಗಳು ಪ್ರೇಮಿಗಳ ದಿನ
ಆಚರಿಸುತ್ತಿದ್ದರು..
ಅದೀನೆಸ್ಟೋ ಜನ ಪ್ರೀತಿ ಕಳೆದ
ದಿನ ಅನುಭವಿಸುತ್ತಿದ್ದರು….
ಕೊಡುವುದಾದರೆ ಕೊಟ್ಟು ಬಿಡಿ
ಆ ಕುಟುಂಬಕ್ಕೆ ಆಗುವ ನೋವ
ಮರೆಸುವ ಬೆನ್ನಗಾವಳನ್ನು …..
ಕೊಡುವುದಾದರೆ ಕೊಟ್ಟು ಬಿಡಿ
ಆ ಬಲಿದಾನದ ಜೀವಗಳಿಗೆ
ಕೆಂಪು ಗುಲಾಬಿಯನ್ನು….
ಕೊಡುವುದಾದರೆ ಕೊಟ್ಟು ಬಿಡಿ
ಆ ಬಲಿದಾನದ ಕುಟುಂಬಕ್ಕೆ
ಮನ ಮೆಚ್ಚುವ ಪ್ರೀತಿಯನ್ನು…..
ಕೊಡುವುದಾದರೆ ಕೊಟ್ಟು ಬಿಡಿ
ನಮ್ಮ ಕಾವಲಿಗಾಗಿ ಮಗನನ್ನು
ಕೊಟ್ಟ ತಾಯಿತಂದೆಯರಿಗೆ
ಮಗನ ಪ್ರೀತಿಯನ್ನು……
ಕೊಡುವುದಾದರೆ ಕೊಟ್ಟು ಬಿಡಿ
ಭಾರತಾಂಬೆಯ ಮಡಿಲ ಸೇರಿದ ಆ ವೀರ ಯೋಧರ
ವೀರ ಮರಣಕ್ಕೆ ಗೌರವವನ್ನು……
ಕೊಡುವುದಾದರೆ ಕೊಟ್ಟು ಬಿಡಿ
ನಮಗೆ ನೆಮ್ಮದಿಯ ಬದುಕು ಕೊಟ್ಟು
ತಾವುಗಳು ಕಾವಲಿಗೆ ಇದ್ದ ಯೋಧನಿಗೆ ಮನಸನ್ನು…..
ಕೊಡುವುದಾದರೆ ಕೊಟ್ಟು ಬಿಡಿ
ತಮ್ಮ ಕುಟುಂಬ ದೂರ ಇಟ್ಟು
ನಮ್ಮೆಲ್ಲರ ಕುಟುಂಬದ ಒಳಿತಿಗೆ
ಶ್ರಮ ಪಡುವ ಯೋಧನಿಗೆ ಪ್ರೇಮ ಕಾಣಿಕೆಯನ್ನು….
✍️ಕೃಷ್ಣ ಸಖಿ ನಾಗರತ್ನ
(ಅಂಚಟಗೇರಿ)