ಬೆಳಗಾವಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ನ್ಯಾಯಾಧಿಶರು ರಾಜ್ಯದಲ್ಲಿ ಸೇವೆ ಸಲ್ಲಿಸಲು ಆನ್ ಲೈನ್ ತರಬೇತಿ : ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಭು ಯತ್ನಟ್ಟಿ
ಬೆಳಗಾವಿ : ರಾಜ್ಯದಲ್ಲಿ ನ್ಯಾಯಾಧೀಶರ 57 ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಹಿಂದೆ ಅರ್ಜಿ ಆಹ್ವಾನಿಸಿದಾಗ ಒಬ್ಬರೇ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿದ್ದು, ಈ ಬಾರಿ ರಾಜ್ಯದಲ್ಲೆ ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಾವಿಯಿಂದ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿ ರಾಜ್ಯದಲ್ಲಿ ಸೇವೆ ಸಲ್ಲಿಸುವ ಉದ್ದೇದಿಂದ ಬೆಳಗಾವಿ ವಕೀಲರ ಸಂಘ, ಪರೀಕ್ಷೆ ಹಾಗೂ ಸಂದರ್ಶನಕ್ಕೆ ನೂರಿತ ನ್ಯಾಯಾಧೀಶರಿಂದ ಮತ್ತು ಸಬ್ಜಕ್ಟ್ ಎಕ್ಸ್ಪರ್ಟ್ಸ್ ರಿಂದ ” ವಕೀಲರ ಸಂಘದ ಯೂಟ್ಯೂಬ್ ಚಾನಲ್ “”ಬೆಳಗಾವಿ ಬಾರ್ ಅಸೋಸಿಯೇಷನ್ ಅಪಿಸಿಯಲ್” ಮುಖಾಂತರ ಆನ್ ಲೈನ್ ತರಬೇತಿ ನೀಡಲಾಗುವುದು ಎಂದು ಬೆಳಗಾವಿ ವಕೀಲರ ಸಂಘದ ಅಧ್ಯಕ್ಷರಾದ ಪ್ರಭು ಶಿವಪ್ಪಾ ಯತ್ನಟ್ಟಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ರಾಜ್ಯ ಪತ್ರದಲ್ಲಿ ಕರ್ನಾಟಕ ಇಚ್ಚ ನ್ಯಾಯಾಲಯ ಬೆಂಗಳೂರು ಅಧಿಸೂಚನೆ ಸಿವಿಲ್ ನ್ಯಾಯಾಧಿಶನ್ ಹುದ್ದೇಗೆ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಈ ಹುದ್ದೆಗೆ ಸಂಬಂದಿಸಿದಂತೆ ಯೂಟ್ಯೂಬ್ ಚಾನಲ್ ನಲ್ಲಿ ನಾಳೆಯಿಂದ ತರಬೇತಿ ಪ್ರಾರಂಭಿಸಲಾಗುವುದು. ಬೆಳಗಾವಿ ವಕೀಲರು ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸಿದರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.