ಭಾರತ ದೇಶದಲ್ಲಿ ಮೊದಲ ಬಾರಿಗೆ ವಿಶೇಷ ಚೇತನರಿಗೋಸ್ಕರ “ಸ್ವರಾಜ್ ಎಬಿಲಿಟಿ” ಎಂಬ ಪೋರ್ಟಲ್ ಲಾಂಚ್
ಯೂತ್ 4 ಜಾಬ್ಸ್ ಫೌಂಡೇಶನ್ ಗ್ರಾಸ್ ರೂಟ್ ಅಕಾಡೆಮಿ ಸಂಸ್ಥೆಯ ವತಿಯಿಂದ ಇಂದು ಬೆಳಗಾವಿ ಜಿಲ್ಲೆ ಯಲ್ಲಿ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಯನ್ನು ನೀಡಲಾಗಿತ್ತು. ತರಬೇತಿಯನ್ನು ಪಡೆದ ವಿಶೇಷ ಚೇತನರಿಗೆ ಪ್ರಮಾಣ ಪತ್ರ ಸಮಾರಂಭದ ಕಾರ್ಯಕ್ರಮವನ್ನು ಮಾಡಲಾಗಿಯಿತು.
ಜ್ಯೋತಿ ಜಂಗಲಪ್ಪಗೌಡ್ ಸೀನಿಯರ್ ಆಫೀಸರ್ ಶಿಶು ಅಭಿವೃದ್ಧಿ ಇಲಾಖೆ ಇವರು ಕಾರ್ಯಕ್ರಮದ ಮುಖ್ಯ ಅದ್ಯಕ್ಷಿಯ ಸ್ಥಾನವನ್ನು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕಿರಣ್ ಇಳಿಗೆರ MRW ಬೆಳಗಾವಿ ಜಿಲ್ಲೆ, ವಾಮನ್ ಕಟ್ಟಿ ( ಅಧ್ಯಕ್ಷರು – association of physically handicapped), ಗೀರಿಷ್ ( ಕಾರ್ಯದರ್ಶಿಗಳು- association of physically handicap) ಮತ್ತು ಶ್ರವಣ ಕುಮಾರ ( Y4J Foundation- Grassroot Academy project lead manager ) ಹಾಗೂ ಸೈಫುಲ್ಲ ( Y4J – Kanrataka state head) ಹಾಗೂ ಬೆಳಗಾವಿ district incharge Shridhar G K ಹಾಗೂ ತಂಡದವರು ಉಪಸ್ಥಿತರಿದ್ದರು.
. ಯೂತ್ 4 ಜಾಬ್ಸ್ ಫೌಂಡೇಷನ್ ಗ್ರಾಸ್ ರೂಟ್ ಅಕಾಡೆಮಿ ಸಂಸ್ಥೆಯಲ್ಲಿ ಎರಡು ವಿಧವಾದ ತರಬೇತಿಗಳನ್ನು ನೀಡಲಾಗುತ್ತದೆ 1) ಸೆಲ್ಫ್ ಎಂಪ್ಲಾಯ್ಮೆಂಟ್
2) ವೆಜ್ ಎಂಪ್ಲಾಯ್ಮೆಂಟ್.
ಯೂತ್ 4 ಜಾಬ್ಸ್ ಫೌಂಡೇಷನ್ ಗ್ರಾಸ್ ರೂಟ್ ಅಕಾಡೆಮಿ ಸಂಸ್ಥೆಯು ಸ್ವರಾಜ್ ಎಬಿಲಿಟಿ ಎಂಬ ಪೋರ್ಟಲ್ ಅನ್ನು ವಿಶೇಷ ಚೇತನರಿಗೋಸ್ಕರ ಮೊದಲ ಬಾರಿಗೆ ನಮ್ಮ ಭಾರತ ದೇಶದಲ್ಲಿ ಲಾಂಚ್ ಮಾಡಲಾಗಿದೆ. ಇದು ವಿಶೇಷ ಚೇತನರಿಗೆ ಸುಲಭವಾಗಿ ಉದ್ಯೋಗವನ್ನು ಹುಡುಕಲು ಸಹಾಯ ಮಾಡುತ್ತದೆ.ಇದರಲ್ಲಿ ವಿಶೇಷ ಚೇತನರು ತಮ್ಮ ಎಲ್ಲಾ ವಿಳಾಸ ದೊಂದಿಗೆ ಅದರಲ್ಲಿ ನೋಂದಣಿ ಮಾಡಿಕೊಂಡರೆ ತಮಗೆ ಅನುಕೂಲವಾಗುವ ಉದ್ಯೋಗಗಳು ಹಾಗೂ ಕಂಪನಿಯ ಹೆಸರುಗಳನ್ನು ತೋರಿಸುತ್ತದೆ. ನೊಂದಣಿ ಮಾಡಿಕೊಂಡ ವಿಶಿಷ್ಟ ಚೇತನರ ಎಲ್ಲ ಮಾಹಿತಿಯನ್ನು ಸ್ವೀಕರಿಸಿ ಅವರಿಗೆ ಉದ್ಯೋಗಕ್ಕೆ ತಕ್ಕಂತೆ ತರಬೇತಿಯನ್ನು ನೀಡಿ ಜಾಬ್ ಪ್ಲೇಸ್ಮೆಂಟ್ ಅನ್ನು ಮಾಡಲಾಗುವುದು.