ಗೋಕಾಕನಲ್ಲಿ ಕಾರ್ಯಕರ್ತರ ಸಭೆ, ಕ್ಷೇತ್ರ ಪರ್ಯಟನೆ, ಕಾರ್ಯಕರ್ತರ, ಮತದಾರರ ನಿರ್ಧಾರದ ಮೇಲೆ, ಏ 19 ರಂದು ನನ್ನ ಅಂತಿಮ ನಿರ್ಣಯ : ಅಶೋಕ ಪೂಜಾರಿ
ಗೋಕಾಕ : ಇಂದು ಗೋಕಾಕನಲಿ ತಮ್ಮ ಬೆಂಬಲಿಗರ ಸಭೆ ಕರೆದು ಚರ್ಚೆ ಮಾಡುತ್ತಿರುವ ಅಶೋಕ್ ಪೂಜಾರಿ, ಯಾವ ಕಾರಣಕ್ಕೆ ನನಗೆ ಟಿಕೇಟ್ ಕೈ ತಪ್ಪಿತು ನನಗೂ ಗೊತ್ತಿಲ್ಲ, ನಾನು ಒಂದುವರೆ ವರ್ಷದ ಹಿಂದೆ ಕಾಂಗ್ರೇಸ್ ಸೇರಿದ್ದೆ, ನನಗೆ ಕಾಂಗ್ರೇಸ್ ಟಿಕೇಟ್ ನೀಡಬೇಕು ಅಂತಾನೇ ಪಕ್ಷಕ್ಕೆ ಆಹ್ವಾನ ನೀಡಿದ್ರು, ಇದೊಂದು ಗೂಢಾರ್ಥದ ಪ್ರಶ್ನೆ ನಾನು ಈವರೆಗೂ ನನಗೆ ಟಿಕೆಟ್ ಯಾಕೆ ತಪ್ಪಿತು ಎಂದು ಚಿಂತನೆ ಮಾಡ್ತಿದ್ದಿನಿ ಎಂದ ಅಶೋಕ ಪೂಜಾರಿ. ಮುಂದೇ ಇವರ ನಿರ್ಧಾರ ಏನು, ಬಂಡಾಯ ಅಭ್ಯರ್ಥಿಯಾಗುವ ಸಾಧ್ಯತೆ ಇದೇಯೆ? ಏಪ್ರಿಲ್ 19 ಕ್ಕೆ ತಮ್ಮ ಅಂತಿಮ ನಿರ್ಧಾರ ತಿಳಿಸುತ್ತೇನೆ ಎಂದ ಪೂಜಾರಿ.
ನನ್ನಲ್ಲಿ ಏನಾದರೂ ದೌರ್ಬಲ್ಯ ಕಂಡರೋ,ಅಥವಾ ಬೇರ್ಯಾರೋ ವ್ಯವಸ್ಥಿತ ತಂತ್ರಗಾರಿಕೆ ಮಾಡಿ ಟಿಕೆಟ್ ತಪ್ಪಿಸಿದರೋ ಗೊತ್ತಿಲ್ಲ, ರಾಷ್ಟ್ರ ಮಟ್ಟದ ರಾಜ್ಯ ಮಟ್ಟದ ನಾಯಕರಿಗೂ ನನ್ನ ಬಗ್ಗೆ ಒಲವಿದೆ, ಆದರೆ ಪಕ್ಷ ಟಿಕೆಟ್ ಹಂಚಿಕೆ ವಿಚಾರವಾಗಿ ಪಕ್ಷ ಬೇರೆ ನಿರ್ಣಯ ತೆಗೆದುಕೊಂಡಿದೆ, ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ಟಿಕೆಟ್ ನೀಡಬೇಕು ಎಂಬ ಭಾವನೆಯಿಂದಲೇ ಅವರು ಸೇರಿಸಿಕೊಂಡಿದ್ದರು ಎಂದು ಹೇಳಿದರು.
ಮೂರು ಸಲ ಜೆಡಿಎಸ್ ನಿಂದ ೧ ಸಲ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಿನಿ, ಅಧಿಕಾರ ಹಾಗೂ ಹಣದ ಆಮಿಷಕ್ಕೆ ನಾನು ಒಳಗಾಗದೆ ವ್ಯವಸ್ಥೆ ಬದಲಾವಣೆಗಾಗಿ ಹೋರಾಡುತ್ತಿದ್ದೆನೆ, ನನ್ನ ವಿರುದ್ಧ ವ್ಯವಸ್ಥಿತ ಸಂಚು ನಡೆಸಿದ್ದಾರೆ.
ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಬಹುದು ಆದರೆ ನನಗೆ ಕಾರ್ಯಕರ್ತರು ಅಭಿಮಾನಿಗಳು ಮುಖ್ಯ, ನನ್ನ ಮೊದಲ ಆಧ್ಯತೆ ಕಾರ್ಯಕರ್ತರು ಮುಖಂಡರು ಇಡೀ ದಿನ ಅವರ ಅಭಿಪ್ರಾಯ ಕೇಳ್ತಿನಿ, ಎರಡನೇಯದ್ದು ನನ್ನ ಬೆಂಬಲಿಸುವ ಜನರದ್ದು, ನಾಳೆಯಿಂದಲೇ 7 ದಿನಗಳ ಕಾಲ ಕ್ಷೇತ್ರ ಪರ್ಯಟನೆ ಮಾಡುತ್ತೆನೆ, ಜನರ ಬಳಿ ನೇರವಾಗಿ ಹೋಗಿ ಅವರ ಅಭಿಪ್ರಾಯಗಳನ್ನು ಕೇಳುತ್ತೆನೆ, ಅವರ ಅಭಿಪ್ರಾಯ ಸಂಗ್ರಹ ಮಾಡಿ ಅಂತಿಮವಾಗಿ 18 ಅಥವಾ 19 ನೇ ತಾರೀಕೂ ನನ್ನ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೆನೆ ಎಂದ ಅಶೋಕ್ ಪೂಜಾರಿ.