ಮುಂಡರಗಿ. ರಾತ್ರೋರಾತ್ರಿ ಅಕ್ರಮವಾಗಿ ಮರಳು ಸಂಗ್ರಹ ಮಾಡಿ ಮರಳುಗಾರಿಕೆ ಮಾಡುತ್ತಿದ್ದ ಅಡ್ಡಿಗೆ ತಾಲೂಕ ತಹಶೀಲ್ದಾರ್ ಶೃತಿ ಮಳ್ಳಪ್ಪಗೌಡರ ಹಾಗೂ ಸಿಪಿಐ ವಿ ಎಮ್ ಹಳ್ಳಿ ನೇತೃತ್ವದಲ್ಲಿ ಮಧ್ಯರಾತ್ರಿ ದಾಳಿ ನಡೆಸಿ ಮರಳನ್ನು ವಶಪಡಿಸಿಕೊಂಡ ಘಟನೆ ಮುಂಡರಗಿ ತಾಲೂಕಿನ ಸಿಂಗಟಾಲೂರು ತುಂಗಭದ್ರ ನದಿ ದಡದಲ್ಲಿ ನಡೆದಿದೆ.
ಅಂದಾಜು 1.3 ಲಕ್ಷ ರೂ ಮೌಲ್ಯದ 12 ಟಿಪ್ಪರ್ ನಷ್ಟು ಮರಳನ್ನು ವಶಕ್ಕೆ ಪಡೆದು ಗದಗ್ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಬಸವರಾಜ್ ಲಕ್ಕೆ ನಾಯಕ್. ವಿಡಿಎ ಕರ್ಮಣಿ. ಪೊಲೀಸ್ ಸಿಬ್ಬಂದಿಗಳಾದ ಅಪ್ಪಣ್ಣ ರಾಥೋಡ್ ಶರೀಫ್ ಮುಲ್ಲಾ ಉಪಸ್ಥಿತರಿದ್ದರು