ಬ.ಬಾಗೇವಾಡಿ: ಪಟ್ಟಣದ ಸರಕಾರಿ ಕಚೇರಿಗಳ ಮುಂದೆ ಇರುವ 2 ಶ್ರೀಗಂಧದ ಮರಗಳು ಕಳ್ಳತನವಾಗಿವೆ ಪಟ್ಟಣದ PWD ಕಚೇರಿ ಆವರಣದ ಪ್ರವಾಸಿ ಮಂದಿರದ ಎದುರುಗಡೆ ಇದ್ದ ಒಂದು ಶ್ರೀಗಂಧ ಮರವನ್ನು ಮಧ್ಯರಾತ್ರಿ ಕಳ್ಳರು ಕೊರೆದುಕೊಂಡು ಹೊದರೆ ಇನ್ನೊಂದು ಮರ ಪಟ್ಟಣದ ಜಿಲ್ಲಾ ಪಂಚಾಯಿತಿ ಕಾರ್ಯಾಲಯದJDP ಮುಂದೆ ಇರುವ ಶ್ರೀಗಂಧ ಮರವು ಕೂಡಾ ಕಳ್ಳತನ ಮಾಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದಂತ ಅಶೋಕ್ ಹಾರಿವಾಳ ರವರು ಸ್ಥಳಕ್ಕೆ ಬಂದು ಭೇಟಿ ಕೊಟ್ಟಾಗ ಸುಮಾರು ಏಳು ಎಂಟು ಲಕ್ಷ ರೂಪಾಯಿ ಬೆಲೆಬಾಳುವ ಮರಗಳು ಕಳ್ಳತನವಾದರೂ ಕೂಡ ಸರ್ಕಾರಿ ಅಧಿಕಾರಿಗಳು ಯಾವುದೇ ರೀತಿ ಕ್ರಮ ತೆಗೆದುಕೊಳ್ಳದೆ ಬೇಜವಾಬ್ದಾರಿ ತೋರಿಸಿದ್ದಾರೆ PWD ಸೆಕ್ಷನ್ ಆಫೀಸರಾದ ಒಂದಾಲ್ ಎಂಬ ಅಧಿಕಾರಿ ಉಡಾಫೆ ಉತ್ತರಗಳನ್ನು ಕೊಡುತ್ತಿದ್ದಾನೆ.
ಮಧ್ಯರಾತ್ರಿ ಕಳ್ಳತನವಾದರು ಮರುದಿನ ಸಂಜೆ ನಾಲ್ಕು ಘಂಟೆತನಕವು ಯಾವುದೇ ಪೊಲೀಸ್ ಠಾಣೆಗೆ ಮತ್ತು ಅರಣ್ಯ ಇಲಾಖೆಗೆ ದೂರು ದಾಖಲಿಸದೇ ಇರುವದು ವಿಪರ್ಯಾಸ ಪೊಲೀಸ್ ಕೇಸ್ ದಾಖಲೆ ಮಾಡದೇ ಇರುವ ಅಧಿಕಾರಿಗಳು ಶ್ರೀಗಂಧ ಮರ ಕಳ್ಳತನ ಮಾಡುವುದಕ್ಕೆ ಇಲ್ಲಿನ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಅಶೋಕ್ ಹಾರಿವಾಳ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾಗ. ತಕ್ಷಣ ಎಚ್ಚೆತ್ತುಕೊಂಡು ಪೊಲೀಸ್ ಠಾಣೆಗೆ ದೂರು ಕೊಟ್ಟು FIR ದಾಖಲೆ ಮಾಡುತ್ತೇವೆ ಎಂದು ಹೇಳಿದ್ದಾರೆ
ಇದೇ ಸಂದರ್ಭದಲ್ಲಿ ಮುತ್ತುರಾಜ್ ಹಾಲಿಯಾಳ. ಪವಡೆಪ್ಪ ಚಲವಾದಿ. ಕೆಂಪೇಗೌಡ ಯಾಳವಾರ ಮತ್ತು ಕರ್ವೆ ಕಾರ್ಯಕರ್ತರು ಉಪಸ್ಥಿತರಿದ್ದರು