ಗಂಗಾವತಿ: ತುಂಗಭದ್ರಾ ಎಡದಂಡೆ ನಾಲಾ ರೈತರಿಗಾಗಿ ಏಪ್ರೀಲ್ ತಿಂಗಳು ಕೊನೆಯವರೆಗೆ ನೀರು ಹರಿಸಲು ಆಗ್ರಹಿಸಿ ಏ.10 ಸೋಮವಾರ ಬೆಳಗ್ಗೆ 10.00 ಗಂಟೆಗೆ ನಗರದ ಎಪಿಎಂಸಿ ಆವರಣದಿಂದ ಕಾಡಾ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಅಧ್ಯಕ್ಷ ಶರಣಗೌಡ ಕೇಸರಹಟ್ಟಿತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದು ಬೆಳಗ್ಗೆ ನಗರದ ಎಪಿಎಂಸಿ ಆವರಣದಿಂದ, ಸಿಬಿಎಸ್ ವೃತ್ತ, ಮಹಾವೀರ ವೃತ್ತ, ಗಾಂಧಿ ವೃತ್ತ, ಬಸವಣ್ಣ ಸರ್ಕಲ್
ಅಂಬೇಡ್ಕರ್ ವೃತ್ತ, ಶ್ರೀ ಕೃಷ್ಣದೇವರಾಯ ವೃತ್ತದ ಮೂಲಕ ಆನೆಗೊಂದಿ ಸಣಾಪುರ ಮಾರ್ಗವಾಗಿ ಬೈಕ್ ರ್ಯಾಲಿ ಮೂಲಕ ಕಾಡಾ ಕಚೇರಿ ತಲುಪಲಾಗುತ್ತದೆ,
ಈ ಬಾರಿ ನವೆಂಬರ್ ವರೆಗೂ ಜಲಾಶಯ ಭರ್ತಿ ಸ್ಥಿತಿಯಲ್ಲೇ ಇತ್ತು. ಆದಾಗ್ಯೂ ಏಪ್ರೀಲ್ ಎರಡನೇ ವಾರದ ನಂತರ ಆನ್ ಅಂಡ್ ಆಫ್ ಸಿಸ್ಟಮ್‍ನಲ್ಲಿ ಎಡದಂಡೆ ಕಾಲುವೆಗೆ ನೀರು ಬಿಡುವುದಾಗಿ ತಿಳಿಸಿದ್ದಾರೆ.
ಇದರಿಂದ ಎಡದಂಡೆ ಕಾಲುವೆಯ
ಕೊನೆ ಭಾಗದ ರೈತರಿಗೆ ತ್ರೀವ್ರ ತೊಂದರೆ ಆಗಲಿದ್ದು, ಬೆಳೆ £ನಾಶವಾಗಲಿದೆ. ಕಳೆದ ಹಲವು ವರ್ಷಗಳಿಂದ ಬೆಲೆ ಸಿಗದೆ ಕಂಗಾಲಾದ ರೈತರಿಗೆ ಈ ಬಾರಿ ಬೆಲೆ ಇದೆ
ಆದರೆ ಬೆಳೆ ಕೈಗೆ ದಕ್ಕುವುದು ಸಂದೇಹವಾಗಿದೆ. ಹೀಗಾಗಿ ದೇಶದ ಬೆನ್ನೆಲಬು ಅನ್ನದಾತನ ರಕ್ಷಣೆಗಾಗಿ ಕೊಪ್ಪಳ ಜಿಲ್ಲೆಯ ಎಲ್ಲ ರೈತ, ದಲಿತ, ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ಶಕ್ತಿ ತುಂಬಬೇಕು ಎಂದು ಶರಣೇಗೌಡ ಮನವಿ ಮಾಡಿದ್ದಾರೆ.