ಗಂಗಾವತಿ: ಪುರುಷನಲ್ಲಿ ತಾಯ್ತನವಿದ್ದರೆ ಅಕ್ಕಮಹಾದೇವಿ ಅರ್ಥವಾಗುತ್ತಾಳೆ. ಸಮಯದ ಮೇಲೆ ನೌಕರಿ ಮಾಡುವ ಪುರುಷನಿಗೆ ನಿವೃತ್ತಿ ಎಂಬುದಿದೆ. ಮನೆಗೆಲಸ ಮಾಡುವ ಮಹಿಳೆಗೂ ಇದು ಅನ್ವಯವಾದರೆ ಅವಳ ದುಡಿಮೆಗೆ ಬೆಲೆ ಕಟ್ಟಲಾದೀತೆ? ಎಂದು ಕೆ.ಎಸ್.ಸಿ ಮಹಿಳಾ ಕಾಲೇಜು ಪ್ರಾಧ್ಯಾಪಕಿ ಶ್ರೀಮತಿ ಅರ್ಚನಾ ಹಿರೇಮಠ ಇವರು ಮಾತನಾಡಿ ತಮ್ಮ ಅಭಿಪ್ರಾಯಪಟ್ಟರು.
ಹಿರೇಜಂತಕಲ್‍ನ ಬಸವ ಭವನದಲ್ಲಿ ಬಸವ ನೀಲಾಂಬಿಕಾ ಮಹಿಳಾ ಸಂಘ ಇವರು ಆಯೋಜಿಸಿದ್ದ ಅಕ್ಕಮಹಾದೇವಿಯವರ ಜಯಂತಿಯ
ಕಾರ್ಯಕ್ರಮದಲ್ಲಿ ವೈರಾಗ್ಯ ನಿಧಿ ಅಕ್ಕ ಕುರಿತು
ಮಾತನಾಡುತ್ತಿದ್ದರು. ಮುಂದುವರೆದು ನಮ್ಮ ಮೆದುಳು ನೆಗೆಟಿವ್ ಥಾಟ್ಸ್‍ಗಳನ್ನು ಬಹುಬೇಗನೇ ಹಿಡಿದಿಟ್ಟುಕೊಳ್ಳುತ್ತದೆ.
ದೂರದರ್ಶನದ ಧಾರವಾಹಿಗಳು ಮಹಿಳೆಯರ ವಿಚಾರ ಶಕ್ತಿಗಳನ್ನು ಕುಂದಿಸುತ್ತವೆ. ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಮಹಿಳೆಯರನ್ನು ಚಿಂತನೆಗೆ ಹಚ್ಚುತ್ತವೆ ಎಂದು ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು.ವಿಶೇಷ ಆಹ್ವಾನಿತರಾದ ಡಾ|| ಸುಲೋಚನಾ ವಿ. ಚಿನಿವಾಲರ್ ಅವರು ವಿಶ್ವ ಆರೋಗ್ಯ ದಿನದ ಮಹತ್ವವನ್ನು ತಿಳಿಸಿದರಲ್ಲದೇ ದೂರದರ್ಶನದ ಆಯ್ಕೆಯಲ್ಲಿ ನಾವು ಎಚ್ಚರವಹಿಸಬೇಕು, ಬಸವ ಟಿ.ವಿ ಯಂತಹ ಮನ ಅರಳಿಸುವ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ದಾಸೋಹಿಗಳಾದ ಅಶ್ವಿನಿ ರಮೇಶ ಹೊಸಮನಿ ಹಾಗೂ ದೇವಮ್ಮ ಯರಡೋಣಿ
ಇವರನ್ನು ಸನ್ಮಾನಿಸಲಾಯಿತು.ಬಸವಕೇಂದ್ರದ ಅಧ್ಯಕ್ಷ ಕೆ. ಬಸವರಾಜ ಇವರು ಮಾತನಾಡಿ, 93 ವರ್ಷಗಳ ಹಿಂದೆ ಇದೇ ದಿನ ಮಹಾತ್ಮಗಾಂಧಿಜಿಯವರು ಪ್ರಾರಂಭಿಸಿದ್ದ ಉಪ್ಪಿನ ಸತ್ಯಾಗ್ರಹದ ದಂಡಿಯಾತ್ರೆಯ ಬಗ್ಗೆ ತಿಳಿಸಿಕೊಡುತ್ತಾ, ಉಪ್ಪಾರ ಸಮಾಜದ ಬಸವ ಸಮಕಾಲೀನ ಶರಣ ಕಾಮಾಟದ ಭೀಮಣ್ಣ ಇವರ ಸ್ಮರಣೋತ್ಸವವನ್ನು ಉಪ್ಪಿನ
ಸತ್ಯಾಗ್ರಹ ನಡೆದ ದಿನವೇ ಆಚರಿಸುವಂತಾಗಬೇಕೆಂದು
ಕರೆನೀಡಿದರು.
ವೇದಿಕೆಯ ಮೇಲೆ ಮಲ್ಲಯ್ಯಸ್ವಾಮಿ ಹಿರೇಮಠ, ಬೂದಿಬಸಪ್ಪ, ಜೆ. ನಾಗರಾಜ, ಬಿ. ನಾರಾಯಣಪ್ಪ, ಡಾ. ಶಶಿಕಲಾ ಶಿವಕುಮಾರ ಮಾಲಿಪಾಟೀಲ್, ಪ್ರದೀಪಗೌಡ ದೇವರಶೆಟ್ಟಿ ಉಪಸ್ಥಿತರಿದ್ದರು.
ಹಿರಿಯರಾದ ಸುಮಂಗಲಾ ಬೈಚಬಾಳ ಇವರು
ಅಧ್ಯಕ್ಷತೆವಹಿಸಿದ್ದರು. ಕವಿತಾ ಮಹೇಶಕುಮಾರ ಇವರು ಸ್ವಾಗತಿಸಿ ನಿರೂಪಣೆಗೈದರು.bಪ್ರತಿ ತಿಂಗಳು ಹುಣ್ಣಿಮೆಯಂದು ವಚನbಹುಣ್ಣಿಮೆಯನ್ನಾಗಿ ನಡೆಯುವುದೆಂದು ಆಯೋಜಕರು ತಿಳಿಸಿದರು.ಈ ಸಂದರ್ಭದಲ್ಲಿ ಜೆ. ನಾಗರಾಜ, ಮಲ್ಲಯ್ಯಸ್ವಾಮಿ ಹಿರೇಮಠ, ಬಿ. ನಾರಾಯಣಪ್ಪ ಸೇರಿದಂತೆ ಇತರ ಸಮಾಜದ ಮುಖಂಡರು ಉಪಸ್ಥಿತರಿದ್ದರು