ಕೊಪ್ಪಳ : ಇತ್ತೀಚಿಗೆ ಸರಕಾರವು ಶಾಲಾ ಮುಖ್ಯೋಪಾದ್ಯಯರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರ ಹೆಸರಿನಲ್ಲಿ ಜಂಟಿ ಖಾತೆಯನ್ನು ತೆರೆಯುವಂತೆ ಆದೇಶವನ್ನು ಮಾಡಿದೆ, ಇದು ಅವೈಜ್ಞಾನಿಕ ಇದ್ದು, ಈ ಆದೇಶವನ್ನು ಸರಕಾರವು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿದ ಬಿಸಿಯೂಟ ತಯಾರಕರು,
ಈ ಮೊದಲು ಇದ್ದ ಆದೇಶದಂತೆ, ಶಾಲಾ ಮುಖ್ಯೋಪಾದ್ಯಯರು ಮತ್ತು ಬಿಸಿಯೂಟ ಯೋಜನೆಯಡಿ ಕೆಲಸವನ್ನು ಮಾಡುವ ಆಯಾ ಶಾಲೆಯ ಮುಖ್ಯ ಅಡುಗೆದಾರರ ಹೆಸರಿನಲ್ಲಿರುವ ಜಂಟಿ ಖಾತೆಯನ್ನು ಮುಂದುವರಿಸುವಂತೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಹೊಸ ಆದೇಶದಂತೆ ಖಾತೆಯನ್ನು ಆರಂಭಿಸಿದಲ್ಲಿ, ಅದರಿಂದ ಅನಗತ್ಯವಾದ ಸಮಸ್ಯೆಗಳು ಶುರುವಾಗುತ್ತವೆ. ಕೆಲಸಕ್ಕೆ ವಿನಾಕಾರಣ ತೊಂದರೆಯಾಗುತ್ತದೆ. ಕಾರಣ ಜಾರಿ ಮಾಡಿರುವ ಹೊಸ ಆದೇಶವನ್ನು ತಕ್ಷಣ ಕೈಬಿಡಬೇಕು.
ಕನಿಷ್ಟ ವೇತನವನ್ನು ಜಾರಿಗೆ ತರಬೇಕು ಅಂದರೆ ತಿಂಗಳಿಗೆ 31 ಸಾವಿರ ರೂಪಾಯಿ ವೇತನವನ್ನು ಜಾರಿ ಮಾಡಬೇಕು.
ಕೆಲಸ ಮಾಡುವ ವೇಳೆಯಲ್ಲಿ ಬಿಸಿಯೂಟ ನೌಕರರಿಗೆ ಅಪಘಾತ ಅಥವಾ ಅನಾಹುತವು ಸಂಭವಿಸಿದಲ್ಲಿ, ತೊಂದರೆಗೆ ಒಳಗಾದ ಕುಟುಂಬಕ್ಕೆ ತಕ್ಷಣ 2 ಲಕ್ಷ ರೂಪಾಯಿ ಪರಿಹಾರವನ್ನು ಮತ್ತು ಚಿಕಿತ್ಸೆಯ ಪೂರ್ಣ ಪ್ರಮಾಣದ ವೆಚ್ಚವನ್ನು ಸರಕಾರವೇ ಭರಿಸಬೇಕು.
ಖಾಸಗೀಕರಣ ನೀತಿಯನ್ನು ಕೈಬಿಡಬೇಕು.
ನಿವೃತ್ತಿಯಾಗಲಿರುವ ಬಿಸಿಯೂಟ ತಯಾರಕರಿಗೆ 1 ಲಕ್ಷದ 50 ಸಾವಿರ ರೂಪಾಯಿ ಇಡಿಗಂಟು ನೀಡಬೇಕು ಹಾಗೂ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿದ ನೌಕರರು
ಇಂದು ಬಿಸಿಯೂಟ ತಯಾರಕರ ಒಕ್ಕೂಟದ ನೇತೃತ್ವದಲ್ಲಿ ಕೊಪ್ಪಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ( ಇ.ಓ) ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಬಸವರಾಜ ಶೀಲವಂತರ, ಗಾಳೆಪ್ಪ ಮುಂಗೋಲಿ, ಮುತ್ತು ಹಡಪದ, ರಸೂಲಬಿ ಕೊಪ್ಪಳ, ಶರಣಮ್ಮ ಹೊಸಬಂಡಿಹರ್ಲಾಪುರ, ಪದ್ಮಾ ಹುಲಗಿ ಮುಂತಾದವರು ಇದರ ನೇತೃತ್ವವನ್ನು ವಹಿಸಿದ್ದರು.